ವಚನ ಸಾಹಿತ್ಯ

ವಚನ ಸಾಹಿತ್ಯ ಜಾಗತಿಕ ಮನ್ನಣೆ ಪಡೆಯುತ್ತಿದೆ. ಅದಕ್ಕೆ ಕಾರಣ, ಜಾತಿಮತಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಳ್ಳುವ ಅದರ ಉದಾತ್ತ ಗುಣ. ಸಕಲಜೀವಾವಳಿಗೆ ಲೇಸನೇ ಬಯಸುವ ವಚನಮಹತ್ವ ಕೇವಲ ಅರ್ಥವಾದರಷ್ಟೇ ಸಾಲದು; ಅದು ನಮ್ಮ ಜೀವನದಲ್ಲಿ ಅನುಷ್ಠಾನಗೊಳ್ಳಬೇಕು. ಆಗಲೇ ನಮ್ಮಗಳ ವ್ಯಕ್ತಿತ್ವ ಅರಳಿ ನಿಲ್ಲಲು ಸಾಧ್ಯ. ಸಹನೆ ಸಮಾನತೆ ಶಾಂತಿ ಸಮಾಜದಲ್ಲಿ ನೆಲೆಸಲು ಸಾಧ್ಯ.